ಮಥುರ: ಬಿಜೆಪಿ ಸಂಸದೆ ಹೇಮ ಮಾಲಿನಿ ಓರ್ವ ಶಾಸ್ತ್ರೀಯ ನೃತ್ಯ ಕಲಾವಿದೆಯೂ ಆಗಿದ್ದು, ರಾಧಾ-ರಮಣ ದೇವಾಲಯದಲ್ಲಿ ನೃತ್ಯ ಮಾಡಿರುವ ಇತ್ತೀಚಿನ ವಿಡಿಯೋ ವೈರಲ್ ಆಗತೊಡಗಿದೆ.
ಮಥುರಾದ ಬೃಂದಾವನದ ಜುಲಾನ್ ಉತ್ಸವದಲ್ಲಿ ಹೇಮ ಮಾಲಿನಿ ನೃತ್ಯ ಮಾಡಿದ್ದಾರೆ. ಶಾಸ್ತ್ರೀಯ ಭರತ ನಾಟ್ಯದ ಉಡುಪಿನಲ್ಲಿ ಹೇಮ ಮಾಲಿನಿ ನೃತ್ಯ ಮಾಡಿದ್ದಾರೆ.
ಭಗವಾನ್ ಕೃಷ್ಣನ ದೇವಾಲಯದಲ್ಲಿ ಭರತ ನಾಟ್ಯ ನಡೆಸಿಕೊಡಲು ಅವಕಾಶ ನೀಡಿರುವುದು ಹೆಮ್ಮೆಯ ಸಂಗತಿ, ನೃತ್ಯ ಮಾಡುವುದಕ್ಕೆ ನನಗೆ ಬಹಳ ಇಷ್ಟ ಎಂದು ಹೇಮ ಮಾಲಿನಿ ಹೇಳಿದ್ದಾರೆ.
ಭರತ ನಾಟ್ಯ ನಡೆಸಿಕೊಟ್ಟ ಹೇಮ ಮಾಲಿನಿ ಅವರಿಗೆ ಗೌರವಾರ್ಥವಾಗಿ ಕೊಳಲು ಹಾಗೂ ಸೀರೆಯನ್ನು ನೀಡಿ ಗೌರವಿಸಲಾಗಿದೆ.